» »Unlabelled » KeLisade kallu kallinali - beLLi kaalungura

By: Ganesh Posted date: 19:11 Comments: 0
ಓ...

ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ 
ಹಂಪೆಯ ಗುಡಿ
ವೈಭವದ ತವರು ಕೂಗಿದೆ 
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು 

ಧೂರಮೆಯ ಆಧಾರ ಈ ಕಲೆಯ ಸಿಂಗಾರ 
ಬಂಗಾರ ತೇರೇರಿ ಮೂಡಣವೇ ಸಿಂಧೂರ 
ದಿನ ದಿನ ದಿನ ಹೊಸದಾಗಿದೆ 
ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ 
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ 
ಕಣ ಕಣ ಕಣ ಕಣ ಕರೆ ನೀಡಿದೆ 
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು

ಕೇಳಿಸದೆ .....

ಗಾಳಿಯೇ ಆದೇಶ ಮೇಘವೇ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ 
ಋತು ಋತುಗಳು ನಿನ್ನ ಕಾದಿವೆ 
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ 
ನವರಸವು ಮೈತಾಳಿ ಜೀವನದ ಜೋಕಾಲಿ 
ಯುಗಯುಗದಲು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು 

ಕೇಳಿಸದೆ.....
TAGS
«
Next
Newer Post
»
Previous
Older Post

No comments:

Leave a Reply

Popular

Comments