Pages

01 February 2014

Naariya seere kadda - Daari tappida maga

ಕೃಷ್ಣ....ಮುರಾರಿ.....ಯಮುನಾ ತೀರ ವಿಹಾರಿ 
ಗೋಪಿ ಮಾನಸ ಹಾರಿ....ಶೌರಿ....ಶೌರಿ 
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ 

ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ
ಕಳ್ಳರ ಕಳ್ಳ ಕೃಷ್ಣನು ಬಂದ 
ಮೋಹದ ಮೋಡಿ ಹಾಕಿದ
ಕೃಷ್ಣ  .........ಮುರಾರಿ......

ಮಗುವಾಗಿರುವಾಗ ಬೆಣ್ಣೆಯ ಕದ್ದ 
ಮಣಿಯೊಡನೆ ರಮಣಿ ಭಾಮೆಯ ಗೆದ್ದ 
ಮದುವೆ ಮನೆಗೆ ನುಗ್ಗಿ, ಏನ್ ಮಾಡ್ದ ಗೊತ್ತೇ 
ರುಕ್ಮಿಣಿಯ ಕದ್ದ
ನರಕಾಸುರನ ಕೊಂದು ಹದಿನಾರು ಸಾವಿರ ನಾರಿಯರ ಗೆದ್ದ 
ಅಹಹ...ಹುದಪ್ಪ 
ಕದ್ದ ಗೆದ್ದ, ಗೆದ್ದ ಕದ್ದ.....

ನಾರಿಯ.....

ಯಮುನಾ ತೀರದಲಿ ತಣ್ಣನೆ ಗಾಳಿಯಲಿ 
ರಾಧೆ ಕಾದಿರಲು ಮೆಲ್ಲನೆ 
ಕೊಳಲನೂದುತಲಿ ಮನವ ಕೆಣಕುತಲಿ 
ಕಂಡು ಕಾಣಿಸದೆ ಮೋಹನ 
ಆಡಿ ಓಡಿದನು 
ಬೋಲೋ ಶ್ರೀ ಕೃಷ್ಣ ಪರಮಾತ್ಮಕಿ 

ನಾರಿಯ.....

ಕೃಷ್ಣ ಎಲ್ಲಿರುವೆ ಏಕೆ ಕಾಡಿರುವೆ 
ವಿರಹದಿ ನೊಂದಿರುವೆ ಕಾಣದೆ
ರಾಧ ಮೋಹನನೆ ಬಾರೋ ಮಾಧವನೆ
ಎಂದು ಕೂಗಿರಲು ಬಂದು 
ತನುವ ಬಳಸಿ ನಿಂದನು 

ನಾರಿಯ ಸೀರೆ.....

ಕೃಷ್ಣ ಎನ್ನಿ ರಾಮ ಎನ್ನಿ 
ಮುಕುಂದ ಎನ್ನಿ ಗೋವಿಂದ ಎನ್ನಿ
ರಾಧೆ ಕೃಷ್ಣ ಜೈ ಜೈ ಕೃಷ್ಣ ......

No comments:

Post a Comment