Pages

01 February 2014

Aralu hunnime - Chandramukhi praaNasakhi

ಆ...............
ಅರಳು ಹುಣ್ಣಿಮೆ ಹರಳು ಹುಣ್ಣಿಮೆ 
ನೀ ಅರುಳು ಮರುಳು ಮಾಡೋ ಹುಣ್ಣಿಮೆ
ಅರಳು ಹುಣ್ಣಿಮೆ ಹರಳು ಹುಣ್ಣಿಮೆ 
ನೀ ಕನಸು ಹೀರಿ ಹಾಡೋ ಹುಣ್ಣಿಮೆ 
ಯೌವ್ವನ ನಿನ್ನ ನೆರಳಿನಲ್ಲಿದೆ 
ಆಕರ್ಷಣೆ ತುದಿ ಬೆರಳಿನಲ್ಲಿದೆ 
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ


ಓ.... ಈ ಕಣ್ಣಿಗೆ ಸರಿದೂಗೋ ಕಣ್ಣುಗಳಿಲ್ಲ
ಈ ಹೊಳಪಿಗೆ ಸರಿದೂಗೋ ಬೆಳಕುಗಳಿಲ್ಲ
ನಿನ್ನ ಕಾಂತಿ ಪ್ರಕೃತಿಗೆ ಮೈಕಾಂತಿ
ಈ ನಗುವ ಕಲೆ ಹಾಕೋ ಕೈಗಳು ಇಲ್ಲ
ವೈಯಾರಕೆ ತಲೆ ಹಾಕೋ ನಾಲಿಗೆಯಿಲ್ಲ
ನಿನ್ನ ಸೊಗಸೇ ಈ ವೊಗಸಿಗೆ ಮನಶಾಂತಿ 
ನಿನ್ನ ಭಂಗಿಯ ಆ..... ಪ್ರಫುಲ್ಲ ಲಲ್ಲೆಯ ಓ.... 
ತಾಕೋದೆ ಸಾಹಿತ್ಯ ತೂಗೋದೆ ಸಂಗೀತ


ಓ...ಈ ಒನಪನು ಮರೆಮಾಚೋ ರೇಶಿಮೆಯಿಲ್ಲ 
ಈ ತಂಪನು ತುಸು ಮಾಸುವ ಮಾಸಗಳಿಲ್ಲ 
ನಿನ ಸ್ಪರ್ಶ ಹೂಗಳಲಿ ಮೃದುವಾಸ 
ಈ ನಡಿಗೆಯ ಕದಲಿಸೋ ನರ್ತನವಿಲ್ಲ
ಈ ಸ್ಫೂರ್ತಿಯ ಬದಲಿಸೋ ಶಕ್ತಿಗಳಿಲ್ಲ 
ನಿನ್ನ ಇರುವಿಕೆ ಹೆಣ್ಗಳಿಗೆ ಉಪವಾಸ 
ಸುಮ್ಮನೇತಕೆ...ಆ...ಸುಳ್ಳು ಹೋಲಿಕೆ....ಓ... 
ನೀನಿರುವ ಸುಳ್ಳಲ್ಲು  ನಾನಿರುವೆ ನಿಜವಾಗಲೂ   

No comments:

Post a Comment