Pages

30 January 2014

Yeke heegaaitho - anjada gandu

ಏಕೆ ಹೀಗಾಯ್ತೋ ನಾನು ಕಾಣೆನೋ 
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ 
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ 
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ಆ ನೋಟದಲಿ ಅದು ಏನಿದೆಯೋ 
ತುಟಿ ಅಂಚಿನಲಿ ಸವಿ ಜೇನಿದೆಯೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ 
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ

ನೀ ನಗುವಾಗ ಜರತಾರಿ ಹೊಸ ಸೀರೆಯುಟ್ಟು ಬಳುಕಾಡಿ ಬಂದೆ
ನೀ ನುಡಿದಾಗ ಮೊಳದುದ್ದ ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ
ಉಸಿರಾಟ ಮರೆತು ಹೋಯಿತು ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು

ಏಕೆ ಹೀಗಾಯ್ತೋ......

ಈ ಹೊಸದಾದ ಆನಂದ ತಂದಂತ ಮತ್ತಿನ ಮುತ್ತನ್ನ ತಂದೆ 
ಆ ನೆನಪಲ್ಲೇ ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ
ಈ ನಾಡಿ ನಿಂತು ಹೋಯಿತು ನಾ ಯಾರೋ ಮರೆತು ಹೋಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು

ಏಕೆ ಹೀಗಾಯ್ತೋ......

No comments:

Post a Comment