Pages

30 January 2014

Mussanje rangalli - psycho

ಮುಸ್ಸಂಜೆ ರಂಗಲ್ಲಿ ನಿನ್ನ ಪ್ರೀತಿ ರಂಗಲ್ಲಿ ತೇಲಿ ಹೋದೆ
ನೀ ಯಾರೋ ಯಾವೂರೋ ಕಾಣೆ ಹೇಗೋ ನನ್ನಲ್ಲಿ ಸೇರಿ ಹೋದೆ 
ಹೃದಯವೇ ನೀ ಬಾ ಬೇಗ, ನಮದಾಗಲಿ ಪ್ರೇಮ ಸಂಯೋಗ

ಬಾನಲ್ಲಿ ಸಂತೋಷದಿ ಹಾರಿದ್ದ ಬೆಳ್ಳಕ್ಕಿ ನಾ 
ಇರಲಿಲ್ಲ ನನಗ್ಯಾವ ಬೇನೆ
ನೀ ಪ್ರೀತಿ ಮಾತಾಡುತ ಬಲೆ ಬೀಸೆ ನಾ ಸಿಕ್ಕಿದೆ
ಹೊಸ ಪ್ರೇಮ ಸವಿಜಾಲದಲ್ಲಿ
ರವಿ ನಿಂತು ಮುಗಿಲ ಮರೆಯಲ್ಲಿ ನಗುವಂತೆ ನೋಡಿ ಧರೆಯನ್ನು
ನಿನ್ನಾಟ ತಂದ ತಾಪ ನನ್ನ ಮನಸ ತಾಕದೇನೋ 
ಬರಿ ಕಣ್ಣು ಕಾಣದ ತಂಗಾಳಿ, ತಂದಂತೆ ಕಂಪಿನ ರಂಗೋಲಿ
ನೀನಿಂತೆಯೋ ಈ ಹೆಣ್ಣಲ್ಲಿ, ನಿಜ ಬಂಧಿಯು ನೀನು ನನ್ನಲ್ಲಿ 

ನರನಾಡಿಯ ವೀಣೆಯು ಮಿಡಿದಂತ ಸ್ವರ ಹೇಳಿದೆ
ಇವನೇನೆ ಆ ನಿನ್ನ ಪ್ರೇಮಿ 
ಆ ಪ್ರೀತಿ ಮಳೆ ಬೀಳಲು ನೂರಾಸೆ ಹೂವಾಗಿದೆ 
ನವ ಚೈತ್ರ ಕಂಡಂತ ಭೂಮಿ 
ಅಲೆ ನೂರು ಆಸೆ ಕಡಲಲ್ಲಿ, ಹುಚ್ಚೆದ್ದು ಕುಣಿಯುತಿದೆ ಇಲ್ಲಿ
ಇದ ತಂದ ಚಂದ್ರ ಎಲ್ಲಿ, ಹೋದೆ ಯಾವ ದಿಕ್ಕಿನಲ್ಲಿ
ಸಾಕಿನ್ನು ಮಾತಿನ ಸಂದೇಶ, ಎದುರಲ್ಲಿ ಬಾ ಪ್ರಿಯ ಸಂತೋಷ
ನೀ ನಾಯಕ ಈ ಕಾವ್ಯಕ್ಕೆ, ಆ ಬ್ರಹ್ಮನು ತಂದ ಬಂಧಕ್ಕೆ

No comments:

Post a Comment