Pages

30 January 2014

Yaaru kooda - love guru

ಓ....ಹೋ......

ಯಾರು ಕೂಡ ನಿನ್ನ ಹಾಗೆ ಪೀಡಿಸಿಲ್ಲ ನನ್ನ ಹೀಗೆ
ನಾನು ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ
ಯಾವುದು ಕನಸು ಯಾವುದು ನನಸು
ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ
ಎಚ್ಚರ ಉಳಿದೆ ಇಲ್ಲ

ನೂರೆಂಟು ರೀತಿಯ ನೆನಪಿನ ಬಳ್ಳಿ
ಮೆಲ್ಲಗೆ ಮೂಡಿದೆ ಎದೆಯಲ್ಲಿ
ಎಂದೆಂದೂ ಬಾಡದ ಕನಸಿನ ಹೂವು
ನಿನ್ನ ಧ್ಯಾನದಲಿ ಅರಳಿ
ಕಣ್ಣಲೆ ಮಾತಾಡುತ ಸರಿಯಾಗಿ ಹೇಳು ಇದು ಏನು ಅಂತ

ನಿಂತಲ್ಲಿ ಕೂತಲ್ಲಿ ಸಂತಸದಂತ  
ಸುಂದರ ಮೋಹಕೆ ಮರುಳಾದೆ
ಬೇರೇನೂ ಬೇಕಿಲ್ಲ ನಿನ್ನನು ಕಂಡು
ಎಲ್ಲ ತಾರೆಗಳ ತೊರೆದೆ
ಮಾತನು ಮರೆಮಾಚುತ ಸವಿಯಾದ ಭಾವ ನಿನಗೂನು ಬಂತ

No comments:

Post a Comment