Pages

30 January 2014

Thangaali tandeya - love guru

ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವ ಸವಿಗನಸಲಿ 
ಕೈಜಾರಿ ಹೋದೆಯ ನನ್ನ ಪ್ರೀತಿಯ
ಮಣ್ಣಲ್ಲಿ ಹೂತೆಯ ನಗುತ ನಗುತ

ಕುಂತು ನಿನ ಕಾಲ ಕೆಳಗೆ
ನಾ ಹೂವು ಹಿಡಿದಂತ ಘಳಿಗೆ
ನಿನಗೇಕೆ ನನ್ನ ಪ್ರೀತಿ ಗೊತ್ತೇ ಆಗದೆ ಹೋಯ್ತು
ಎಷ್ಟೊಂದು ಸಾರಿ ನಾ ಮನಸನ್ ತೆರೆದೆ ನಿನ್ಮುಂದೆ
ಒಂದೊಂದು ಸಾರಿನು ಅರಿಯದೇಕೆ ನೀ ಹೋದೆ
ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ 

ನಿಂಗೆ ಅನಿಸಿಲ್ಲವೇನು ನಿಂಗಾಗೆ ಬಂದೋನು ನಾನು
ಈ ನನ್ನ ಕಣ್ಣ ಭಾಷೆ ಓದೇ ಇಲ್ಲ ನೀನೇಕೆ
ಈ ಗಾಳಿ ಕಾಣಲ್ಲ ಅನುಭವವುಂಟು ಸುಳ್ಳಲ್ಲ
ಈ ಪ್ರೀತಿ ಹೀಗೇಕೆ ಹೇಳದೆ ತಿಳಿಯೋದೇ ಇಲ್ಲ
ಈ ನಿಜ ಅರಿಯೋ ಮುನ್ನ ಕಳೆದು ಕುಂತೆ ನಾ ನಿನ್ನ

No comments:

Post a Comment