Pages

30 January 2014

Kaadu kaadu naa kuLitiruve - sangama

ಕಾದು ಕಾದು ನಾ ಕುಳಿತಿರುವೆ 
ಎಂದು ಎಂದು ನೀ ನನಗೊಲಿವೆ 
ಆಗಲಿ ಸಂಗಮ ನಮ್ಮ ಹೃದಯದ ಸಂಗಮ 

ಹುಡುಗ ಬಾರೋ ಬೇಗ ನೀನು 
ಹೃದಯ ಕೂಗಿ ಕರೆಯುತಿದೆ 
ಹುಡುಗಿ ಮೋಡಿ ಮಾಡಿ ನೀನು 
ಮನಸು ತೇಲಿದೆ 

ಎಲ್ಲೋ ಇಟ್ಟು ಕಳೆದಿರೋ ಓಲೆ 
ಏನೋ ಗೀಚಿ ಹರಿದಿರೋ ಹಾಳೆ 
ಎಲ್ಲದಕ್ಕೂ ನೀನೆ ಕಾರಣ 
ಮನಸು ಕೆಡಿಸಿದವನೇ 

ಏನೋ ಮಾಡೋ ನೆಪದಲಿ ನೀನು 
ನನ್ನೇ ನೋಡೋ ಗಳಿಗೆಗೆ ನಾನು 
ಯಾಕೆ ಹೀಗೆ ಕಾದು ಕೂರುವೆ 
ತಿಳಿಸು ನನಗೆ ನೀನೆ

ಕಣ್ಣಿಂದ ಒಂದು ಕಣ್ಣೀರ ಬಿಂದು ಖುಷಿಯಲ್ಲಿ ಜಾರಿದೆ 
ಆಗಲಿ ಸಂಗಮ ನಮ್ಮ ಹೃದಯದ ಸಂಗಮ 

ಒಂಟಿಯಾಗಿ ಕುಳಿತರು ಹೀಗೆ 
ಅಂಟಿ ನಿಂಗೆ ಕುಳಿತಿರೋ ಹಾಗೆ
ಬೆಚ್ಚನೆಯ ಭಾವ ನನ್ನಲಿ ಬರುತಲಿರುವುದೇಕೋ

ನೆನ್ನೆ ಮೊನ್ನೆ ಎಣಿಸಿರಲಿಲ್ಲ
ಇಂದು ನೀನೆ ಎದೆಯೊಳಗೆಲ್ಲ
ನಿನ್ನ ಬಿಟ್ಟು ಬೇರೆ ಯೋಚನೆ
ನನಗೆ ಬರದು ಏಕೋ

ಕಣ್ಮುಚ್ಚಿಕೊಂಡು ನಿನ್ನನ್ನೇ ಕಂಡು ಮೈಮರೆತು ಹೋದೆನಾ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ

No comments:

Post a Comment