Pages

30 January 2014

lokave heLida maatidu - raNadheera

ಲೋಕವೇ ಹೇಳಿದ ಮಾತಿದು 
ವೇದದ ಸಾರವೇ ಕೇಳಿದು 
ನಾಳಿನ ಚಿಂತೆಯಲ್ಲಿ ಬಾಳಬಾರದು 
ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು... ಮಾಡಿದರೆ 
ಜಗಕೆ ಹೆದರಬಾರದು 


ಅನಾರ್ಕಲಿ.....ಅನಾರ್ಕಲಿ 


ಮರಳುಗಾಡೆ ಇರಲಿ ಭೂಮಿಗೆ ಸೂರ್ಯನಿಳಿದು ಬರಲಿ 
ಪ್ರೀತಿಸೋ ಜೀವಗಳು ಬಾಡಲಾರದಂಥ  ಹೂವುಗಳು
ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ 
ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ ಕಾಣದಿಲ್ಲಿ 
ಲೋಕವ ಕಾಡುವ ಕೋಟಿ ರಾಕ್ಷಸರಿದ್ದರು ಭೂಮಿ ಕೇಳಲಿಲ್ಲ
ಬಾಯ್ ತೆರೆಯಲಿಲ್ಲ ಮಾತಾಡಲಿಲ್ಲ 
ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲ
ಬಾಯ್ ಬಿಟ್ಟಿರಲ್ಲ ಹೂಳಿಟ್ಟಿರಲ್ಲ      


ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು 


ಓ ರೋಮಿಯೋ......ಓ ರೋಮಿಯೋ 


ದ್ವೇಷವೆಂಬ ವಿಷವ ಸೇವಿಸುತ ಖಡ್ಗ ಮಸೆಯುತಿರುವ 
ಅಂಧರ ಕಣ್ಣಿಗೆ ಈ ಪ್ರೀತಿಯ ಸ್ವರೂಪ ಕಾಣಿಸದು 
ಮನಸು ಕಣ್ಣು ತೆರೆದು ನೋಡಿದರೆ ಎಲ್ಲ ಶೂನ್ಯವಿಹುದು
ಪ್ರೀತಿಯ ನಂಬಿದರೆ ಅಂಧಕಾರದಲ್ಲೂ ಕಾಣುವುದು 
ರಾಜ್ಯಗಳಳಿದು ಕೋಟೆ ಕೊಟ್ಟಲು ಉರುಳಿದವು ಹೆಣ್ಣಿಗಾಗಿ
ಈ ಮಣ್ಣಿಗಾಗಿ ಈ ಹೊನ್ನಿಗಾಗಿ 
ಜೀವದ ಆಸೆಯ ಬಿಟ್ಟು ವಿಷವ ಕುಡಿದರಿಲ್ಲಿ ಪ್ರೀತಿಗಾಗಿ
ಆನಂದವಾಗಿ ಆಶ್ಚರ್ಯವಾಗಿ 


ಪ್ರೀತಿ  ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು.....


ಲೋಕವೇ ಹೇಳಿದ ಮಾತಿದು......

No comments:

Post a Comment