Pages

05 February 2014

Enagali-Mussanje maathu

ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ - ೨
ನನ್ನಾಣೆ ನನ್ನ ಮಾತು ಸುಳ್ಳಲ್ಲ - ೨

(ಚಲಿಸುವ ಕಾಲವು ಕಲಿಸುವ ಪಾಠವ
ಮರೆಯ ಬೇಡ ನೀ ತುಂಬಿಕೋ ಮನದಲಿ) - ೨
(ಇಂದಿಗೋ ನಾಳೆಗೋ ಮುಂದಿನ ಬಾಳಲಿ
ಗೆಲ್ಲುವಂತ ಸ್ಫೂರ್ತಿ ದಾರಿದೀಪ
ನಿನಗೆ ಆ ಅನುಭವ) - ೨ ||ಏನಾಗಲಿ...||

ಕರುಣೆಗೆ ಬೆಲೆಯಿದೆ ಪುಣ್ಯಕೆ ಫಲವಿದೆ
ದಯವತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ ಸಿಲುಕಿದ ಜೀವಕೆ
ಜೀವ ನೀಡುವ ಹೃದಯವೇ ದೈವವು
ಹರಸಿದ ಕೈಗಳು ನಮ್ಮನು ಬೆಳೆಸುತಾ
ವಿಧಿಯ ಬರಹವಾಗಿ ಮೌನದಲ್ಲೇ ನಮ್ಮನು ಕಾಯುತ
ಪ್ರತಿಫಲ ಬಯಸದೆ ತೋರಿದ ಕರುಣೆಯು
ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವುದು

ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ - ೨
ನನ್ನಾಣೆ ಪ್ರೀತಿಯೆಂದು ಸುಳ್ಳಲ್ಲ - ೨

No comments:

Post a Comment