Pages

02 February 2014

Badapayi Hrudayake-Snehitharu

 ಬಡಪಾಯಿ ಹೃದಯಕೆ ಮಾತೆ ಬಾರದೆ, ಒದ್ದಾಡಿ ಒಳಗಡೆ ನಿಂತೇ ಹೋಗಿದೆ
ತಿಳಿಸುವ ಪರಿಯೆಂತೋ ತಿಳಿಯದು ನನಗಂತು, ಹಿಡಿದಿದೆ ನಿನ್ನ ಹುಚ್ಚು ನನಗೀಗ
ಅಪರಾಧಿ ಮನಸಿದು ಅಡಗಿ ಕುಂತಿದೆ, ಅದಕೇನು ಹೇಳಲಿ ನನದೆ ತಪ್ಪಿದೆ
ನಿನ್ನ ಜೊತೆ ತುಸು ದೂರ ನಡೆಯುವ ಅಧಿಕಾರ ಕೊಡು ನಂಗೆ ಈಗ ದಯಮಾಡಿ
ಬಡಪಾಯಿ ಹೃದಯಕೆ ಮಾತೆ ಬಾರದೆ, ಒದ್ದಾಡಿ ಒಳಗಡೆ ನಿಂತೇ ಹೋಗಿದೆ

ನಿನ್ನ ನೋಡಿದ ಕೂಡಲೇ ಎಲ್ಲ ದೇವರ ಬಳಿ ಓಡಿದೆ ನಿನ್ನ ಬೇಡಿದೆ
ನೀನು ನೋಡಲಿ ಅಂತಲೇ ನಿನ್ನ ಬೀದೀಲಿ ದಿನ ಸುಮ್ಮನೆ  ಸುಳಿದಾಡಿದೆ
ತಿರುವಿನ ತುದಿಯಲ್ಲಿ ತಿರುಗುವ ಕ್ಷಣದಲ್ಲಿ ನನ್ನ ಕಡೆ ತುಸು ನೋಡಿ ಹೋಗೆ ನೀನು
ಮರದಡಿ ನೆರಳಲ್ಲಿ ಕುಳಿತರೆ ಜೊತೆಯಲ್ಲಿ ಹೊರ ಬರಬಹುದೇನು ಪಿಸುಮಾತು
ಬಡಪಾಯಿ ಹೃದಯಕೆ ಮಾತೆ ಬಾರದೆ, ಒದ್ದಾಡಿ ಒಳಗಡೆ ನಿಂತೇ ಹೋಗಿದೆ

ಹೀಗೂ ಉಂಟೆ ಎನ್ನುವ ಈ ನಿನ್ನ ಅಂದವ ನೋಡಲು ಬಳಿ ಬಂದೆನು ನೋಡುತ ಬಲಿ ಆದೆನು
ನೀನು ಬಂದ ನಂತರ ನಾನಿಲ್ಲ ನಂತರ ಪಾಪದ ಹುಡುಗ ಕಣೇ ಪ್ರೀತಿಗೆ ಹೊಸಬ ಕಣೇ
ನಿನ್ನ ಹೆಸರಲ್ಲೇ ನಿತ್ಯ ನನ್ನ ಉಸಿರಾಟ, ನಿನ್ನ ನೆನಪಲ್ಲೇ ಎಲ್ಲೋ ನನ್ನ ಅಲೆದಾಟ
ಬಯಸುವೆ ಉಪಕಾರ ತಿಳಿಸೆಯ ಪರಿಹಾರ ಪಡೆಯುವುದು ಹೇಗೆ ನಾ ನಿನ್ನ


ಬಡಪಾಯಿ ಹೃದಯಕೆ ಮಾತೆ ಬಾರದೆ, ಒದ್ದಾಡಿ ಒಳಗಡೆ ನಿಂತೇ ಹೋಗಿದೆ...!!

No comments:

Post a Comment