Pages

30 January 2014

Yaako eno - abhay

ಯಾಕೋ ಏನೋ ಯಾಕೋ ಏನೋ 
ಜೊತೆಯಲೇ ಬೆರೆತೆವು ಜಗವನೆ ಮರೆತೆವು
ನನಗೆ ನೀನು ಇನ್ನು ನಿನಗೆ ನಾನು
ನನಗೆ ನೀನು ಇನ್ನು ನಿನಗೆ ನಾನು

ನೀನೆ...ಮೊದಲ ಹುಡುಗಿಯು ನೀನೆ 
ಕೊನೆಯ ಸನಿಹವು ನೀನೆ
ಹಗಲುಗನಸಲು ನೀನೆ ಇರುಳು ನೆನಪಲು
ಅದೇನಾಯ್ತೋ ಕಾಣೆ ನಾನು
ಎದೆ ತುಂಬ ನಿನದೆ ಸುದ್ದಿ
ಕೇಳೆ ಜಾಣೆ ಪ್ರೀತಿ ಆಣೆ
ಅದೇ ನಾನು ನಿನ್ನ ಬಂಧಿ
ಜೊತೆಗೆ ನೀನು ಇರಲು ಬದುಕು ಜೇನು
ನನಗೆ ನೀನು ಇನ್ನು ನಿನಗೆ ನಾನು 

ಕಣ್ಣ ಕೊಳದ ಒಳಗಡೆ ನಿನ್ನ 
ಅಡಗಿಸಿಡುವೆನು ಚಿನ್ನ 
ಜನುಮಜನುಮಕು ನನ್ನ ಬದುಕು ಅರಳಿಸು
ನಾನೇ ನಿನ್ನ ಹೃದಯದ ಚೋರ
ನನ್ನಾಣೆ ಭಾಷೆ ನೇರ
ನೀನೆ ನನ್ನ ಪ್ರೇಮದ ಸಾರ
ನಿನ್ನ ಒಲವೆ ನನಗಾಧಾರ 
ಮಿನುಗು ಬಾರೆ ನನ್ನ ಮಿನುಗುತಾರೆ 
ನನಗೆ ನೀನು ಇನ್ನು ನಿನಗೆ ನಾನು

No comments:

Post a Comment