Pages

30 January 2014

Preetige janma - excuse me

ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ 
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ 
ಹಂಚಿಕೋ ಹೋಗಿ ಎಂದ
ಕೊನೆಗೂ ಸಿಗದೇ ಪ್ರೀತಿ

ಬದುಕು ರಣಭೂಮಿ
ಜಯಿಸಲಿ ಪ್ರೇಮಿ 

ಅವನ ಅವಳ ಬದುಕು ಮುಗಿದರೂನು
ಅವರ ಪ್ರೀತಿ ಗುರುತು ಸಾಯದಿನ್ನು
ಬಿರುಗಾಳಿಗೆ ಸೂರ್ಯ ಹಾರಿ ಹೋದರು 
ಪ್ರೀತಿಯು ಹಾರದು 
ಈ ಜಗದ ಎಲ್ಲ ಗಡಿಯಾರ ನಿಂತರು 
ಪ್ರೀತಿಯು ನಿಲ್ಲದು 

ಬದುಕು ಸುಡುಭೂಮಿ
ನಡುಗನು ಪ್ರೇಮಿ 

ಯಮನು ಶರಣು ಎನುವ ಪ್ರೀತಿ ಮುಂದೆ
ಧನಿಕ ತಿರುಕ ಪ್ರೀತಿ ಮುಂದೆ ಒಂದೆ 
ಹಳೆ ಗಾದೆ ವೇದಾಂತ ಬೂದಿಯಾದರು
ಪ್ರೀತಿಯು ಸಾಯದು 
ತಿರುಗಾಡುವ ಭೂಮಿಯು ನಿಂತೆ ಹೋದರು 
ಪ್ರೀತಿಯು ನಿಲ್ಲದು 

ಬದುಕು ಮರುಭೂಮಿ
ಮಳೆ ಹನಿ ಪ್ರೇಮಿ

No comments:

Post a Comment