» »Unlabelled » O nalmeya - junglee

By: Ganesh Posted date: 19:02 Comments: 0
ಓ ನಲ್ಮೆಯ ನಾವಿಕನೆ ಎಂದು ನಿನ್ನ ಆಗಮನ
ನೀ ಎಲ್ಲಿಯೇ ಅಡಗಿದರು ಅಲ್ಲೇ ನನ್ನ ಈ ಗಮನ
ಈ ಪ್ರೀತಿಯ ಪರಿಣಾಮ ನಿನಗೂ ಕೂಡ ಹೀಗೆನಾ

ಕರೆದುಬಿಡು ನನ್ನ ನೀ ಬೇಗ
ಬರೆದುಕೊಡು ಎಲ್ಲ ಆವೇಗ
ಮಿರುಗುತಿದೆ ಜೀವ ನೋಡೀಗ ಏನು ಕಾರಣ
ನನ್ನ ಪಾಡಿಗಿಲ್ಲಿ ನಾನು ನಿನ್ನ ಹಾಡು ಹಾಡಲೇನು 
ನಿನ್ನ ಊರಿನಿಂದ ಬಂದ ತಾರೆಯನ್ನೇ ನೋಡಲೇನು
ಹಚ್ಚಿಕೊಂಡ ಹುಚ್ಚಿ ನಾನು ನೀನು ಹೀಗೆನಾ? 

ನಡೆಯುತಿರುವಾಗ ಜೊತೆ ನೀನು 
ಹಿಡಿದುಕೊಳಲೇನು ಕೈಯನ್ನು
ತಡೆಯದಿರು ಯಾವ ಮಾತನ್ನು ನೀನು ಈ ದಿನ
ಬೇರೆ ಏನು ಕಾಣಲಾರೆ ಒಮ್ಮೆ ನೀನು ಕಂಡ ಮೇಲೆ
ಬಾಕಿ ನೂರು ಮಾತನೆಲ್ಲ ಮೌನದಲ್ಲೇ ಅಂದಮೇಲೆ 
ಮೋಹದಲ್ಲಿ ಮೂಕಿ ನಾನು ನೀನು ಹೀಗೆನಾ? 
TAGS
«
Next
Newer Post
»
Previous
Older Post

No comments:

Leave a Reply

Popular

Comments