» »Unlabelled » Nee nanna manasinali - taj mahal

By: Ganesh Posted date: 19:31 Comments: 0
ನೀ ನನ್ನ ಮನಸಿನಲಿ ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ

ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೆ
ಅನುರಾಗದ ಸವಿ ಈ ಬಂಧನ
ಮನದಾಳದ ಭಾವ ಈ ಸ್ಪಂದನ
ಮೌನವೇ ಒಮ್ಮೆ ಮಾತಾಡಮ್ಮ  
ಓ ಪ್ರೇಮವೇ ನನ್ನ ಮನ ಸೇರಮ್ಮ  
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ

ತಂಗಾಳಿಯಾಗಿ ನೀ ತೇಲಿಬಾ
ಬೆಳದಿಂಗಳಂತೆ ಬೆಳಕಾಗಿ ಬಾ
ಮುಂಜಾನೆ ಮಂಜು ನೀನಾಗಲು
ಹೊಂಗಿರಣವಾಗಿ ನಿನ್ನ ಸೇರಲು
ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ
ಈ ನನ್ನ ಹೃದಯದ ತುಂಬ ನೀ ನಗುವ ಪ್ರತಿಬಿಂಬ 

ನೀ ನನ್ನ ಮನಸಿನಲಿ.......
TAGS
«
Next
Newer Post
»
Previous
Older Post

No comments:

Leave a Reply

Popular

Comments