Pages

30 January 2014

Mungaru maLeye - mungaru male

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ

ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮನಾದವೋ
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನ ಬಿಲ್ಲು ಏನು ಮೋಡಿಯೋ

ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರು

ಒಲವ ಚಂದಮಾಮ ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು
ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ   

No comments:

Post a Comment