Pages

30 January 2014

Madhuvana karedare - inti ninna preetiya

ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೆ ... 

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ
ಸೆರೆ ಆಗು ಆದರೆ

ಮಧುವನ ...

ಕಂಗಳಲಿ  ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ.......
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ 

ಮಧುವನ ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ.....
ಎದುರಿದ್ದು ಕರೆಯುವೆ ಏಕೆ
ಜೊತೆಯಿದ್ದು ಮರೆಯುವೆ ಏಕೆ
ನಿನ್ನೊಲವು ನಿಜವೆ ಆದರೆ.....

No comments:

Post a Comment