Pages

30 January 2014

Khushiyaagide - taj mahal

ಅವ್ಳಂದ್ರೆ ನಂಗೆ ತುಂಬಾ ಇಷ್ಟ,
ಅವ್ಳಿಗು ನಾನಂದ್ರೆ ಇಷ್ಟ.....ಅನ್ಸತ್ತೆ.....

ಖುಷಿಯಾಗಿದೆ ಏಕೋ ನಿನ್ನಿಂದಲೆ
ನಾ ನೋಡದೆ ನಿನ್ನನು ಇರಲಾರೆನೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ ನಿನ್ನನೆ ನೋಡುವೆ
ಹೇಳೇ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ

ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ
ಆದರು ಮರೆತೇ ಇಲ್ಲ ನಾನಿನ್ನ
ಲ ಲ ಲ ಲ........
ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ............

ಮಂಜಿನ ಹನಿಗಳ ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆದೆ
ಚಿಟಪಟ ಮಳೆಯಲಿ ಪದೆ ಪದೆ ನೆನೆಯುತ
ನಿನ ಸ್ಪರ್ಶವ ಸವಿದೆ
ನಿನ್ನಲ್ಲೇ ನಾ ಬೆರೆತೆ
ಲ ಲ ಲ ಲ ......
ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ..........

ಅವ್ನಂದ್ರೆ ನಂಗೆ ತುಂಬಾ ಇಷ್ಟ
ಅವ್ನಿಗೂ ನಾನಂದ್ರೆ ಇಷ್ಟ....ಅನ್ಸತ್ತೆ.....

No comments:

Post a Comment