Pages

30 January 2014

Bhaanu kempaadante - abhay

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ 
ತಾಜಾ ಅನುರಾಗ ಶುರುವಾಗುವ ಲಕ್ಷಣವೇ 
ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ 

ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಒಂದು ಚೂರೆ ಕಾಯಿಸು, ಬಂದು ಚೆಂದಗಾಣಿಸು
ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸೊಂದೆ ಆದಮೇಲೆ ಮರೆಯಾಗಿ ದೂರ....ಇರಲಾರೆ ಇರಲಾರೆ

ಒಂದೆ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರು ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೇ
ಜೊತೆಯಲ್ಲೇ ಇಂದು ನಿನ್ನ ಖುಷಿಯಾಗಿ ಹಾರಿ.....ಬರಲೇನು ಬರಲೇನು

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈ ಕ್ಷಣವೇ 
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ.....

No comments:

Post a Comment