Pages

30 January 2014

Beladingalanthe minu minuguta - psycho

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು
ಅನುರಾಗದಲ್ಲಿ ಅಲೆ ಅಲೆಯುತ ನಸು ನಾಚಿ ನಿಂದಿರಲು ನೀನು
ಮರುಳಾದೆ ದಿವ್ಯ ಸಖಿ ನಿನಗೆ ಪ್ರಣಾಮ
ಅಪರೂಪ ರೂಪಸಿಯೇ ನಿನಗೆ ಪ್ರಣಾಮ

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು
ಕುಡಿನೋಟದಲ್ಲೇ ನುಡಿ ನುಡಿಯುತ ನೇವರಿಸಿ ನಿಂದಿರಲು ನೀನು
ಮನಸೋತೆ ಮೊಹಿತನೆ ನಿನಗೆ ಪ್ರಣಾಮ
ಹಿತವಾದ ಸ್ನೇಹಿತನೇ ನಿನಗೆ ಪ್ರಣಾಮ

ಕನಸಲ್ಲೂ ಹುಚ್ಚನಂತೆ ನಿನಗಾಗಿ ಓಡುವೆ
ಮೈಮರೆತು ಸಂತೆಯಲ್ಲೂ ನಿನ್ನನ್ನೇ ಕೂಗುವೆ
ಒರಗಿರಲು ನಿನ್ನ ಮಡಿಲಲಿ 
ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ
ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಝೀಕುವೆ
ನೀನಿರಲು ನನ್ನ ಕತೆಯಲಿ
ನಾನಿರುವೆ ನಿನ್ನ ಜೊತೆಯಲಿ.......

ಕಣ್ತುಂಬ ನಿನ್ನ ಅಂದ ಸವಿಯುತ್ತ ಕೂರಲೆ
ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ
ನೀನಿರಲು ನನ್ನ ತೋಳಲಿ
ನಾನೆಂದೂ ನೋಡದಂತ ಬೆಳಕೊಂದು ಮೂಡಿದೆ
ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ
ಕೈಯಿರಲು ನಿನ್ನ ಕೈಯಲಿ
ನಾನಿರುವೆ ನಿನ್ನ ಬಾಳಲಿ..... 

No comments:

Post a Comment