Pages

30 January 2014

Baa maLeye baa - accident

ಬಾ ಮಳೆಯೇ ಬಾ, ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು 
ನನ್ನ ನಲ್ಲೆ ಬರಲಾರದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿಸು ನೀ
ಹಿಂತಿರುಗಿ ಹೋಗದಂತೆ ಹಿಂತಿರುಗಿ ಹೋಗದಂತೆ
ಬಿಡದೆ ಬಿರುಸಾಗಿಸು ನೀ 

ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು
ಕಾದಿಹಳು ಅಬಿಸಾರಿಕೆ ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು ಒಮ್ಮತಕೆ ಸಡಿಲಾಗದಂತೆ

ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ಬೀರು ದೀಪವೆ ಬೀರು ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ, ಆರು ಬೇಗಲೇ ಆರು
ಶೃಂಗಾರ ಛಾಯೆಯಲ್ಲಿ ನಾಚಿ ನೀರಾಗದಂತೆ

ಬಾ ಮಳೆಯೇ ಬಾ.....    

No comments:

Post a Comment