Pages

30 January 2014

aaraamaagi idde naanu - gokula

ಆರಾಮಾಗೆ ಇದ್ದೆ ನಾನು
ನಿನ್ನ ಕ‍ಂಡು, ಅರೆ ಏನಾಯಿತು
ಅರೆ ಏನಾಯಿತು, ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೆ, ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು... 

ಆರಾಮಾಗೆ 

ನೆನೆಯುತ, ಬರೆದೆ ನೆನೆಯುತ‌
ಮನ ಇನ್ನೂನು ಭಾವುಕವಾಯಿತು..
ಬಯಸುತ, ಒಲವ ಬಯಸುತ‌
ಕ್ಷಣ ಒಂದೊಂದು ರೋಚಕವಾಯಿತು..
ನಾನು ನೀನು ಕೂತುಕೊಂಡ ಜಾಗ‌
ನಮ್ಮ ಮಾತೆ .. ಆಡುತಾವೆ ಈಗ..
ಪಿಸುಮಾತಾಡುತ, ಅರೆ ಏನಾಯಿತು
ಸವಿ ಕನಸೊಂದು ಜೀವಂತವಾಯಿತು... 

ಆರಾಮಾಗೆ 

ಮರೆಯಿತು, ಹೆಸರೆ ಮರೆಯಿತು
ಈ ಮುದ್ದಾದ ಮೋರೆಯ ನೋಡುತ..
ಹೊರಟಿತು, ಹೃದಯ ಹೊರಟಿತು
ನೀನಿದ್ದಲ್ಲೇ ಡೇರೆಯ ಹೂಡುತ..
ಕಾಣದಂತೆ ಓಡಿಬಂದೆಯೇನು
ಕಾಡಿದಷ್ಟು ಪ್ರೀತಿ ಚೆಂದವೇನು
ಜೊತೆ ಒಡಾಡುತ, ಅರೆ ಏನಾಯಿತು
ಈ ಬಡಜೀವ ಶ್ರೀಮಂತವಾಯಿತು... 

ಆರಾಮಾಗೆ

No comments:

Post a Comment