» »Unlabelled » Kaanada kadalige- Myna/Bhavageethe

By: Ganesh Posted date: 16:19 Comments: 0
ಕಾಣದ ಕಡಲಿಗೆ ... ಹಂಬಲಿಸಿದೆ ಮನ.
ಕಾಣದ ಕಡಲಿಗೆ ಹಂಬಲಿಸಿದೆ ಮನ ... ಮನ.. ಮನ...

ಕಾಣದ ಕಡಲಿಗೆ ಹಂಬಲಿಸಿದೆ ಮನ ||2||
ಕಾಣಬಲ್ಲೆನೆ ಒಂದು ದಿನ 
ಕಡಲನು ಕೂಡಬಲ್ಲೆನೆ ಒಂದು ದಿನ  ||2||
ಕಾಣದ ಕಡಲಿಗೆ ಹಂಬಲಿಸಿದೆ ಮನ
 
ಕಾಣದ ಕಡಲಿನ ಮೊರೆತದ  ಜೋಗುಳ 
ಒಳಗಿವಿಗಿಂದು ಕೇಳುತಿದೆ ||2||
ನನ್ನ ಕಲ್ಪನೆಯು ತನ್ನ ಕಡಲನೆ 
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ 
ಎಲ್ಲಿರುವುದೋ ಅದು ಎಂತಿರುವುದೋ ಅದು 
ನೋಡಬಲ್ಲೆನೆ ಒಂದು ದಿನ 
ಕಡಲನು ಕೂಡಬಲ್ಲೆನೆ ಒಂದು ದಿನ  
ಕಾಣದ ಕಡಲಿಗೆ ಹಂಬಲಿಸಿದೆ ಮನ.
 
ಸಾವಿರ ಹೊಳೆಗಳು ತುಂಬಿ ಹರಿದರೂ 
ಒಂದೇ ಸಮನಾಗಿಹುದಂತೆ  ||2||
ಸುನೀಲ ವಿಸ್ತರ ತರಂಗ ಶೋಭಿತ 
ಗಂಭೀರಾಂಬುಧಿ ತಾನಂತೆ 
ಮುನ್ನೀರಂತೆ..., ಅಪಾರವಂತೆ...,
ಕಾಣಬಲ್ಲೆನೆ ಒಂದು ದಿನ 
ಅದರೊಳು ಕರಗಲಾರೆನೆ ಒಂದು ದಿನ 
ಕಾಣದ ಕಡಲಿಗೆ ಹಂಬಲಿಸಿದೆ ಮನ.
 
ಜಟಿಲ ಕಾನನದ ಕುಟಿಲ ಪಥಗಳಲಿ 
ಹರಿವ ತೊರೆಯು ನಾನು 
ಎಂದಿಗಾದರು.. ಎಂದಿಗಾದರು.. ಎಂದಿಗಾದರೂ 
ಕಾಣದ ಕಡಲನು ಸೇರಬಲ್ಲೆನೇನು...
ಜಟಿಲ ಕಾನನದ ಕುಟಿಲ ಪಥಗಳಲಿ 
ಹರಿವ ತೊರೆಯು,,, ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು...
ಸೇರಬಹುದೇ ನಾನು... ಕಡಲ ನೀಲಿಯೊಳು ಕರಗಬಹುದೆ ನಾನು 
ಕರಗಬಹುದೆ ನಾನು ... ಕರಗಬಹುದೆ ನಾನು ... !!
 
TAGS
«
Next
Newer Post
»
Previous
Older Post

No comments:

Leave a Reply

Popular

Comments