Pages

30 January 2014

NenapugaLa maatu madhura - chandramukhi praaNasakhi

ನೆನಪುಗಳ ಮಾತು ಮಧುರ
ಮೌನಗಳ ಹಾಡು ಮಧುರ
ಕನಸೇ ಇರಲಿ ನನಸೆ ಇರಲಿ
ಪ್ರೀತಿ ಕೊಡುವ ಕನಸೇ ಮಧುರ

ಸಾವಿರ ಹೂಗಳ ಹುಡುಕಿದರೂ
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೆ 
ಸಾವಿರ ಹೃದಯವ ಹುಡುಕಿದರೂ 
ಅಳತೆ ಬೇರೆ ಸೆಳೆತ ಬೇರೆ ಪ್ರೀತಿಯೊಂದೆ
ತಿಂಗಳ ಬೆಳಕನು ಹಿಡಿದು ಗಾಳಿಗೆ ಸವರೋ ಪ್ರೀತಿ
ಗಾಳಿಯ ಗಂಧವ ಕಡೆದು ಅಂದವ ಹೆಣೆಯೋ ಪ್ರೀತಿ
ಸಂಖ್ಯೆ ಇರದೇ ಗುಣಿಸೋ ಪ್ರೀತಿ
ನಿದ್ದೆ ನುಂಗಿ ಕುಣಿಸೋ ಪ್ರೀತಿ 
ಶಬ್ದವಿರಲಿ ಶಬ್ದವಿರಲಿ ಪ್ರೀತಿ ಕೊಡುವ ಶಬ್ದ ಮಧುರ 

ಸಾವಿರ ಹಾಡನು ಹುಡುಕಿದರೂ 
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೆ   
ಸಾವಿರ ಪ್ರೇಮಿಯ ಹುಡುಕಿದರೂ
ತವಕ ಬೇರೆ ಪುಳಕ ಬೇರೆ ಪ್ರೀತಿಯೊಂದೆ
ನದಿಗಳ ಕಲರವಗಳಲಿ ಅಲೆಗಳು ತೊಯೋ ಪ್ರೀತಿ
ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೋ ಪ್ರೀತಿ
ಚಿಲುಮೆಯಂತೆ ಚಿಮ್ಮೋ ಪ್ರೀತಿ
ಒಲುಮೆಯೊಳಗೆ ಕಾಯ್ಸೋ ಪ್ರೀತಿ
ಸ್ವಾರ್ಥವಿರಲಿ ಸ್ವಾರ್ಥವಿರಲಿ ಪ್ರೀತಿ ಕೊಡುವ ಸ್ವಾರ್ಥ ಮಧುರ     

No comments:

Post a Comment