Pages

30 January 2014

hey dinakara - OM

ಓಂ.....ಓಂ......
ಓಂ..ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ
ಓಂ..ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ

ಹೇ ದಿನಕರ ಶುಭಕರ ಧರೆಗೆ ಬಾ
ಈ ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ
ಮಾನಸ ಮಂದಿರ ತುಂಬು ಓಂಕಾರ ನಾದವೊಂ ಓಂ.....

ನಗುವ ಮನಸೆ ಸಾಕು ನಮಗೆ ಹಗಲುಗನಸೆ ಬೇಡ
ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ
ತಂದೆ ತಾಯೆ ದೈವ ಗುರುವೇ ನಮ್ಮ ಜೀವ
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು......
ಹೇ ದಿನಕರ......

ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು
ದಯೆ ತೋರೋ ಧರಣಿಯಂತ ಮನೋಧರ್ಮ ನೀಡು
ನೊಂದ ಎಲ್ಲ ಜೀವ ನನ್ನದೆಂಬ ಭಾವ
ಬಾಳಿನಲ್ಲಿ ತುಂಬೋ ವಿದ್ಯೆ ವಿನಯ ಕರುಣಿಸೋ
ಆ.........
ಹೇ ದಿನಕರ......

No comments:

Post a Comment